ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ
ಕೆ. ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.

ಸಂಘದ ಸದಸ್ಯರ ಮಕ್ಕಳಿಗೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಹಾಗೂ ಅದಕ್ಕಿಂತ ಹೆಚ್ಚು ಅಂಕ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ

ಮತ್ತು

2025-26ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ ಉತ್ತೀರ್ಣರಾಗಿ, 2026-27ನೇ ಶೈಕ್ಷಣಿಕ ಸಾಲಿನಲ್ಲಿ

1. ಎಂ.ಬಿ.ಬಿ.ಎಸ್/ಬಿಡಿಎಸ್/ಆಯುಷ್/ವೆಟರ್ನರಿ ಮುಂತಾದ ವೈದ್ಯಕೀಯ ಶಿಕ್ಷಣ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಷ್ಟ್ರೀಯ NEET ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿAdmission ಪಡೆದ ವಿದ್ಯಾರ್ಥಿಗಳಿಗೆ,
2. ಇಂಜಿನಿಯರಿಗ್ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಜ್ಯ ಮತ್ತು ರಾಷ್ಟ್ರೀಯ ಪ್ರವೇಶ ಪರೀಕ್ಷೆ (CET/JEE) ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿAdmission ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಪದವಿಯ ವ್ಯಾಸಂಗವನ್ನು ರಾಜ್ಯ (CET) ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿAdmission ಪಡೆದ ವಿದ್ಯಾರ್ಥಿಗಳಿಗೆ,
3. ಅಗ್ರಿಕಲ್ಚರಲ್/ಫಿಶರೀಶ್ ಮತ್ತು ವೆಟರ್ನರಿ ಪದವಿ/ಸ್ನಾತಕ್ಕೋತ್ತರ ಪದವಿ ರಾಜ್ಯ ಅಇಖಿ ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿAdmission ಪಡೆದ ವಿದ್ಯಾರ್ಥಿಗಳಿಗೆ,
4. ಕಾನೂನು ಪದವಿ / ಸ್ನಾತಕೋತ್ತರ ವ್ಯಾಸಂಗವನ್ನು CLET ಪರೀಕ್ಷೆ ಮುಖೇನ National Law ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ Admission ಪಡೆದ ವಿದ್ಯಾರ್ಥಿಗಳಿಗೆ,
5. ಎಂ.ಎ/ಎಂ.ಕಾಂ./ಎಂ.ಬಿ.ಎ/ಎಂ.ಎಸ್.ಎಸ್ಸಿ/ಎಂ.ಇಡಿ ಪದವಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ,
6. ಪಾಲಿಟೆಕ್ನಿಕ್ ಡಿಪ್ಲೊಮಾ /ಐ.ಟಿ.ಐ/ಬಿ.ಪಿ.ಇ.ಡಿ/ಬಿ.ಇ.ಡಿ./ಡಿ.ಇ.ಡಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ,
7. ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಭಾ ಪುರಸ್ಕಾರದ ಅರ್ಜಿಗಳು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಮತ್ತು ಸಂಘದ ಅಧಿಕೃತ ವೆಬ್‌ಸೈಟ್ https://ramakrishnacredit.com/applications/ ನಲ್ಲಿ ಲಭ್ಯವಿದ್ದು June 15, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Copyright @2024