ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಇದರ ಸದಸ್ಯರು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವು ದಿನಾಂಕ 09.08.2026, ಆದಿತ್ಯವಾರದಂದು ಅಪರಾಹ್ನ 03:00 ಗಂಟೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕಟ್ಟಡದ 5ನೇ ಮಹಡಿಯ ಹಾಲ್ನಲ್ಲಿ ಜರಗಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ವಹಿಸಲಿರುವರು. ಉದ್ಘಾಟಕರಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಪೊಲೀಸ್ನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಕಮಿಶನರ್ ಶ್ರೀಮತಿ ನಜ್ಮಾ ಫಾರೂಖೀಯವರು ಭಾಗವಹಿಸಲಿರುವರು. ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ವೃತ್ತಿಪರ ಪದವಿಯ 114 ವಿದ್ಯಾರ್ಥಿಗಳಿಗೆ ಒಟ್ಟು ರೂ. 12 ಲಕ್ಷದಷ್ಟು ಪ್ರತಿಭಾ ಪುರಸ್ಕಾರ ಬಹುಮಾನವನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಕಟಣೆಯು ತಿಳಿಸಿದೆ.