ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. : ಮೂರನೇ ತ್ರೈಮಾಸಿಕಾಂತ್ಯ 31.12.2024ಕ್ಕೆ ಉತ್ತಮ ಪ್ರಗತಿ

ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2024-25ನೇ ಸಾಲಿನ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕ ಅವಧಿ ಅಂತ್ಯ ದಿನಾಂಕ 31.12.2024ಕ್ಕೆ ಒಟ್ಟು ರೂ. 564 ಕೋಟಿ ಠೇವಣಿ, ರೂ. 485 ಕೋಟಿ ಸಾಲ ಹಾಗೂ ರೂ. 1049 ಕೋಟಿ ವ್ಯವಹಾರವನ್ನು ದಾಖಲಿಸಿದೆ. 2023ರ ಡಿಸೆಂಬರ್ಗೆ ಹೋಲಿಸಿದಲ್ಲಿ ಠೇವಣಾತಿಯು ರೂ. 66 ಕೋಟಿ ಹೆಚ್ಚಳ ಮತ್ತು ಸಾಲ ರೂ. 59 ಕೋಟಿ ಹೆಚ್ಚಳ ಹೀಗೆ ಒಟ್ಟು ವ್ಯವಹಾರದಲ್ಲಿ ರೂ. 125 ಕೋಟಿ ಹೆಚ್ಚಳವಾಗಿ 14% ವೃದ್ಧಿಯಾಗಿರುತ್ತದೆ.
31.12.2024ಕ್ಕೆ ನಿವ್ವಳ ಲಾಭವು ರೂ. 8.25 ಕೋಟಿ ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ರೂ. 1.60 ಕೋಟಿ ಹೆಚ್ಚಳವಾಗಿ 24% ವೃದ್ಧಿಯಾಗಿರುತ್ತದೆ. 2023-24ನೇ ಸಾಲಿನಲ್ಲಿ ಸಂಘವು ತನ್ನ ಸದಸ್ಯರಿಗೆ ಶೇ.25 ಡಿವಿಡೆಂಡನ್ನು ನೀಡಿದ್ದು, ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದಿದ್ದು, ಕಳೆದ ಆರು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ. ಸಂಘದಲ್ಲಿ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 17 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ವಸೂಲಾತಿಯು ಉತ್ತಮವಾಗಿರುತ್ತದೆ.
ಸ್ಥಾಪನೆಯ 30 ವರ್ಷದಲ್ಲಿ ರೂ. 1000 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಪ್ರಥಮ ಕ್ರೆಡಿಟ್ ಸಹಕಾರ ಸಂಘವಾಗಿ ಮೂಡಿಬಂದಿರುವುದು ಸಂಘದ ಸಾಧನೆಯ ವಿಶೇಷತೆ ಆಗಿರುವುದು.
ಮಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ, ಇದೇ ಮೊದಲ ಬಾರಿಗೆ ಅನುಷ್ಟಾನಿಸಲಾದ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸವಾಂಗೀಣ ಪ್ರಗತಿ ಸಾಧಿಸಿದ ಅತ್ಯುತ್ತಮ ಕ್ರೆಡಿಟ್ ಸಹಕಾರ ಸಂಘಕ್ಕೆ ನೀಡಲಾಗುವ “ಸಹಕಾರ ಮಾಣಿಕ್ಯ” ಪ್ರಶಸ್ತಿ ಪಡೆದ ಪ್ರಪ್ರಥಮ ಹಾಗೂ ಏಕೈಕ ಕ್ರೆಡಿಟ್ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಸಂಘವು ಪಾತ್ರವಾಗಿರುವುದು. ಈ ಹಿಂದಿನ ವರ್ಷಗಳಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗೆ 6 ಬಾರಿ ರಾಜ್ಯ ಮಟ್ಟದ ಹಾಗೂ 13 ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯು ಲಭಿಸಿದೆ.
ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.