“ಸಹಕಾರ ಮಾಣಿಕ್ಯ”
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ
ಮೊದಲನೇ ತ್ರೈಮಾಸಿಕ 30.06.2026 ಕ್ಕೆ ಗಣನೀಯ ಪ್ರಗತಿ
ರೂ.1362 ಕೋಟಿ ವ್ಯವಹಾರ (ಠೇವಣಾತಿ + ಹೊರಬಾಕಿ ಸಾಲ)

ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2026-27ನೇ ಸಾಲಿನ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕ ಅವಧಿ ದಿನಾಂಕ 30.06.2026ಕ್ಕೆ ರೂ.721 ಕೋಟಿ ಠೇವಣಿ, ರೂ.641 ಕೋಟಿ ಸಾಲ, ರೂ.1362 ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2025ನೇ ಜೂನ್ 30ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.115 ಕೋಟಿ 19% ವೃದ್ಧಿ, ಹೊರಬಾಕಿ ಸಾಲದಲ್ಲಿ ರೂ.120 ಕೋಟಿ ಹೆಚ್ಚಳ 23% ವೃದ್ಧಿಯೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.235 ಕೋಟಿ ವೃದ್ಧಿಯಿಂದ 21% ಹೆಚ್ಚಳವನ್ನು ಸಾಧಿಸಿದೆ.
30.06.2026ಕ್ಕೆ ನಿವ್ವಳ ಲಾಭವು ರೂ.3.74 ಕೋಟಿ ದಾಖಲಿಸಿದ್ದು, ಇದು 2025ನೇ ಜೂನ್ 30ಕ್ಕೆ ಹೋಲಿಸುವಾಗ ರೂ.1.10 ಕೋಟಿ ಹೆಚ್ಚಳವಾಗಿ 42% ವೃದ್ಧಿಯಾಗಿರುತ್ತದೆ. ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, 2024-25ನೇ ಸಾಲಿಗೆ ಶೇ.25 ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ.
ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ.
30.03.2027ಕ್ಕೆ ಒಟ್ಟು ವ್ಯವಹಾರದ ಗುರಿ ರೂ.1515 ಕೋಟಿಯಾಗಿದ್ದು, ಅದನ್ನು ತಲುಪಲು ಸರ್ವ ಪ್ರಯತ್ನ ಮಾಡಲಾಗಿದೆ ಹಾಗೂ ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.