ಶ್ರೀ ರಾಮಕೃಷ್ಣ ಸೊಸೈಟಿ: 32ನೇ ವಾರ್ಷಿಕ ಮಹಾಸಭೆ – 2025-26ನೇ ಸಾಲಿಗೆ ರೂ. 19.54 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ, ಆಧ್ಯಕ್ಷರು

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 32ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್ನಲ್ಲಿ ದಿನಾ೦ಕ 06.09.2026ರ೦ದು ಜರಗಿತು.
ಸ೦ಘವು 31.03.2026ಕ್ಕೆ ಅ೦ತ್ಯವಾದ, 2025-26ನೇ ಸಾಲಿನಲ್ಲಿ ರೂ.695 ಕೋಟಿ ಠೇವಣಾತಿ ಹಾಗೂ ರೂ. 611 ಕೋಟಿ ಸಾಲ ಮತ್ತು ಮುಂಗಡ ಹೀಗೆ ಒಟ್ಟು ರೂ. 1306 ಕೋಟಿ ಒಟ್ಟು ವ್ಯವಹಾರದೊಂದಿಗೆ ರೂ.19.54 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆಂಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.
ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ೨೦೨೫-೨೬ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ, ಸದಸ್ಯರು ಪ್ರಸ್ತಾವಿಸಿರುವ ವಿಷಯಗಳ ಬಗ್ಗೆ ಸಮಂಜಸವಾದ ವಿವರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ಕೇಂದ್ರ ಕಛೇರಿ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು 2026 ಜನವರಿ ತಿಂಗಳಲ್ಲಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು, ಸದಸ್ಯರಿಗೆ ಅನುಕೂಲವಾಗುವಂತೆ ಸಾಲಗಾರರ ಮರಣೋತ್ತರ ಸಾಲ ಸಂರಕ್ಷಣಾ ಯೋಜನೆಯನ್ನು ಅನುಷ್ಠಾನಿಸಲಾಗಿರುವುದನ್ನು ತಿಳಿಸಿ, ಸಂಘದ ಗುರಿ ಮೀರಿದ ದಾಖಲೆಯ ಪ್ರಗತಿ ಸಾಧನೆಗೆ ಸದಸ್ಯರು ನೀಡಿರುವ ಸಹಕಾರಕ್ಕೆ ಧನ್ಯವಾದವನ್ನು ಸಲ್ಲಿಸಿದರು.
ಸ೦ಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರುಗಳಾದ ಶ್ರೀಮತಿ ಎ. ರತ್ನಕಾ೦ತಿ ಶೆಟ್ಟಿ, ಸರ್ವಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ ಕೆ. ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್. ಅಡ್ಯ೦ತಾಯ, ಸಿ.ಎ. ಎಚ್.ಆರ್.ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾÊಕ್ ಮತ್ತು ಡಾ| ಬಿ. ಸಂಜೀವ ರೈ ಉಪಸ್ಥಿತರಿದ್ದರು.
ಮಹಾಪ್ರಬಂಧಕರಾದ ಗಣೇಶ್ ಜಿ. ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿಂಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಿಸಿದರು. ಸಂಘದ ಸೇವೆಯಿಂದ ವಯೋನಿವೃತ್ತರಾದ ವ್ಯವಸ್ಥಾಪಕರಾಗಿದ್ದ ಬಾಲಕೃಷ್ಣ ರೈಯವರನ್ನು ಸನ್ಮಾನಿಸಲಾಯಿತು. 2025-26ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 100 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಆಳ್ವಾಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ದಿಶಾ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡಿರುವ ಸಂಘದ ಸದಸ್ಯರ ಮಕ್ಕಳಾದ ಧ್ರುವಿ ಬಿ., ಗಗನ್ ಆಳ್ವ, ಸಮನ್ಯು ಶೆಟ್ಟಿ, ಪ್ರಜ್ವಲ್ ಶೆಟ್ಟಿ, ತ್ರಿಶಾ ಎಸ್. ಶೆಟ್ಟಿ, ದಿಯಾ ಮತ್ತು ಸಂಘದ ಸಿಬ್ಬಂದಿಗಳ ಮಕ್ಕಳಾದ ಅನ್ವಿತಾ ಶೆಟ್ಟಿ, ಸಮೃದ್ಧಿ ಶೆಟ್ಟಿ ಮತ್ತು ಜಾಗೃತಿ ಪಿ. ಶೆಟ್ಟಿ ಯವರಿಗೆ ಕೆ.ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ನಿರ್ದೇಶಕರುಗಳಾದ, ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಯಂ. ರಾಮಯ ಶೆಟ್ಟಿ ವಂದಿಸಿದರು. ಸಿಬ್ಬಂದಿಗಳಾದ ಸುಶ್ಮಿತಾ ಪ್ರಾರ್ಥಿಸಿದರು, ಶಮಂತ್ ಟಿ. ರೈ ಮತ್ತು ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ಬಹು ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.