‘ಸಹಕಾರ ಮಾಣಿಕ್ಯ’
ಶ್ರೀ ರಾಮಕೃಷ್ಣ ಸೊಸೈಟಿ: 31ನೇ ವಾರ್ಷಿಕ ಮಹಾಸಭೆ
2024-25ನೇ ಸಾಲಿಗೆ ರೂ. 16.29 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ, ಆಧ್ಯಕ್ಷರು

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 31ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್ನಲ್ಲಿ ದಿನಾ೦ಕ 05.09.2025ರ೦ದು ಜರಗಿತು.
ಸ೦ಘವು 31.03.2025ಕ್ಕೆ ಅ೦ತ್ಯವಾದ, 2024-25ನೇ ಸಾಲಿನಲ್ಲಿ ರೂ.589 ಕೋಟಿ ಠೇವಣಾತಿ ಹಾಗೂ ರೂ.505 ಕೋಟಿ ಸಾಲ ಮತ್ತು ಮುಂಗಡ ಹೀಗೆ ಒಟ್ಟು ರೂ. 1094 ಕೋಟಿ ಒಟ್ಟು ವ್ಯವಹಾರದೊಂದಿಗೆ ರೂ.16.29 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆ೦ಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.
ಸಂಘದ ಅಧ್ಯಕ್ಷರಾದ ಶೀ ಕೆ. ಜೈರಾಜ್ ಬಿ. ರೈಯವರು 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮತ್ತು ಸದಸ್ಯರಿಂದ ಬಂದ ಪತ್ರಗಳ ವಿಷಯಗಳ ಬಗ್ಗೆ ಸಮಂಜಸವಾದ ವಿವರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ಈವರೆಗೆ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಲ್ಪಟ್ಟು ಪ್ರತಿಷ್ಟಿತ ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಸಂಘವು ಭಾಜನರಾಗಿರುವುದಕ್ಕೆ ಎಲ್ಲಾ ಸದಸ್ಯ ಭಾಂಧವರನ್ನು ಅಭಿನಂದಿಸಿದರು. ಸಂಘದ ಕೇಂದ್ರ ಕಛೇರಿ ಕಟ್ಟಡದ ಕಾಮಗಾರಿಯು ಚುರುಕಾಗಿ ನಡಿಯುತ್ತಿದ್ದು, 2025ರ ವರ್ಷಾಂತ್ಯದೊಳಗೆ ಕಟ್ಟಡವನ್ನು ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು ಹಾಗೂ ಸದಸ್ಯರಿಗೆ ಅನುಕೂಲವಾಗುವಂತೆ ಸಾಲ ಸಂರಕ್ಷಣೆ ಯೋಜನೆ, ಸದಸ್ಯರ ಖಾತೆಗೆ ನೇರ ಹಣ ವರ್ಗಾವಣೆಯ ಸೌಲಭ್ಯಗಳನ್ನು ಅನುಷ್ಟಾನಿಸಲಾಗುವುದು ಎಂದು ತಿಳಿಸಿದರು.
ಸ೦ಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರುಗಳಾದ ಶ್ರೀಮತಿ ಎ. ರತ್ನಕಾ೦ತಿ ಶೆಟ್ಟಿ, ಸರ್ವಶ್ರೀ ಡಾ ಕೆ. ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್. ಅಡ್ಯ೦ತಾಯ, ಸಿ.ಎ. ಎಚ್.ಆರ್.ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾÊಕ್ ಮತ್ತು ಡಾ| ಬಿ. ಸಂಜೀವ ರೈ ಉಪಸ್ಥಿತರಿದ್ದರು.
ಮಹಾಪ್ರಬ೦ಧಕರಾದ ಶ್ರೀ ಗಣೇಶ್ ಜಿ. ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು. ಸಂಘದ ಸೇವೆಯಿಂದ ವಯೋನಿವೃತ್ತರಾದ ಸಹಾಯಕ ಮಹಾಪ್ರಬಂಧಕರಾಗಿದ್ದ ಶ್ರೀ ಮೋಹನ್ದಾಸ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ಮಹಾಪ್ರಬ೦ಧಕರಾದ ಶ್ರೀ ಗಣೇಶ್ ಜಿ. ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು. ಸಂಘದ ಸೇವೆಯಿಂದ ವಯೋನಿವೃತ್ತರಾದ ಸಹಾಯಕ ಮಹಾಪ್ರಬಂಧಕರಾಗಿದ್ದ ಶ್ರೀ ಮೋಹನ್ದಾಸ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ನಿರ್ದೇಶಕರುಗಳಾದ, ಶ್ರೀ ಪಿ.ಬಿ. ದಿವಾಕರ ರೈ ಸ್ವಾಗತಿಸಿದರು, ಶ್ರೀ ಯ೦. ರಾಮಯ ಶೆಟ್ಟಿ ವ೦ದಿಸಿದರು. ಸಿಬ್ಬ೦ದಿಗಳಾದ ಶ್ರೀಮತಿ ಅಶ್ವಿನಿ ಎಸ್. ಶೆಟ್ಟಿ ಹಾಗೂ ಶ್ರೀಮತಿ ಕಾವ್ಯಶ್ರೀ ಪ್ರಾರ್ಥಿಸಿದರು, ಶ್ರೀ ಶಮಂತ್ ಟಿ. ರೈ ಮತ್ತು ಶ್ರೀಮತಿ ಸನಿಹ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಹು ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.